ನಮ್ಮ ಬಗ್ಗೆ

ಯುವ ಸಬಲೀಕರಣ ಕೇಂದ್ರಗಳು ಯುವಜನತೆಗೆ ಮಾಹಿತಿ, ತರಬೇತಿ ಮತ್ತು ಪ್ರೇರಣೆಗಳನ್ನು ಒಂದೇ ಸೂರಿನಡಿ ಒದಗಿಸುವ ಸರ್ಕಾರದ ಕಳಕಳಿಯ ಪ್ರಯತ್ನವಾಗಿರುತ್ತದೆ.
ನಮ್ಮ ಕೆಲಸದ ಹರಿವು
ಕೌನ್ಸೆಲಿಂಗ್ ಮೂಲಕ ಯುವಕರನ್ನು ಸಶಕ್ತಗೊಳಿಸುವುದು
Workflowimage
ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರ ವಿದ್ಯಾಭ್ಯಾಸದಲ್ಲಿ ನಿರತರಾಗಿರುವ, ಶಿಕ್ಷಣವನ್ನು ಪೂರ್ಣಗೊಳಿಸಿರುವ ಅಥವಾ ಶಿಕ್ಷಣವನ್ನು ಅರ್ಧಕ್ಕೇ ಮೊಟಕುಗೊಳಿಸಿರುವ ನಮ್ಮ ಯುವಜನರಿಗಾಗಿ ವಿವಿಧ ಇಲಾಖೆಗಳ ಮೂಲಕ ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿವೆ, ಸೌಲಭ್ಯಗಳನ್ನು ನೀಡುತ್ತಿವೆ, ಮತ್ತು ವ್ಯಾಸಂಗ/ಕೌಶಲ್ಯವೃದ್ಧಿಯ ಅವಕಾಶಗಳನ್ನು ಕಲ್ಪಿಸುತ್ತಿವೆ. ಜೊತೆಗೆ ಶಿಕ್ಷಣಕ್ಕಾಗಿ, ವ್ಯಾಪಾರ ನಡೆಸುವುದಕ್ಕಾಗಿ ಮತ್ತು ಉದ್ಯೋಗಗಳನ್ನು ಸೃಷ್ಟಿಸುವುದಕ್ಕಾಗಿ ಬ್ಯಾಂಕುಗಳು ಹಲವು ಆರ್ಥಿಕಸೇವೆಗಳನ್ನು ನೀಡುತ್ತಿವೆ.
ಇಂಥ ಸೌಕರ್ಯಗಳನ್ನು ಬಹುಸಂಖ್ಯೆಯ ಸಂಸ್ಥೆಗಳು ನೀಡುತ್ತಿರುವುದರಿಂದ ಯುವಜನತೆಗೆ ಈ ಎಲ್ಲ ಸೇವೆಗಳನ್ನು ಕುರಿತ ಪೂರ್ಣ ಮಾಹಿತಿ ಇರುವುದಿಲ್ಲ. ನಾಲ್ಕು ಹಂತಗಳಲ್ಲಿ ಯುವಜನಾಂಗ ಕವಲುದಾರಿಗಳ ಅಂಚಿನಲ್ಲಿ ನಿಂತು ಮಾರ್ಗದರ್ಶನವನ್ನು ಅಪೇಕ್ಷಿಸುತ್ತವೆ:
  • 10ನೇ ತರಗತಿ ಪೂರ್ಣಗೊಳಿಸಿದ ನಂತರ"
  • ದ್ವಿತೀಯ ಪಿಯುಸಿ ಪೂರ್ಣಗೊಳಿಸಿದ ನಂತರ
  • ಪದವಿ ವ್ಯಾಸಂಗವನ್ನು ಪೂರೈಸಿದ ನಂತರ
  • ಸ್ನಾತಕೋತ್ತರ ಕೋರ್ಸ್‍ಗಳನ್ನು ಪೂರ್ಣಗೊಳಿಸಿದ ನಂತರ
ಯುವಸಬಲೀಕರಣ ಕೇಂದ್ರಗಳು ಈ ಎಲ್ಲ ಸ್ತರಗಳ ಹಿತಾಸಕ್ತಿಯನ್ನು ರಕ್ಷಿಸುವತ್ತ ಕಾರ್ಯನಿರ್ವಹಿಸುವ ಉದ್ದೇಶ ಹೊಂದಿವೆ.
ಧ್ಯೇಯಗಳು:

ಒಂದು ಸೂರಿನಡಿ ಮತ್ತು ಒಂದು ವೆಬ್ ಪೋರ್ಟಲ್ ಮೂಲಕ ಕೆಳಕಂಡ ಸೌಲಭ್ಯಗಳನ್ನು ಕಲ್ಪಿಸುವುದು:

  • ವಿದ್ಯಾಭ್ಯಾಸದಲ್ಲಿ ನಿರತರಾಗಿರುವ, ಶಿಕ್ಷಣವನ್ನು ಪೂರ್ಣಗೊಳಿಸಿರುವ ಅಥವಾ ಶಿಕ್ಷಣವನ್ನು ಅರ್ಧಕ್ಕೇ ಮೊಟಕುಗೊಳಿಸಿರುವ ಯುವಜನತೆಗಾಗಿ ವಿವಿಧ ಇಲಾಖೆಗಳು ಜಾರಿಗೊಳಿಸುತ್ತಿರುವ ಯೋಜನೆಗಳು, ನೀಡುತ್ತಿರುವ ಸೌಲಭ್ಯಗಳು ಮತ್ತು ವ್ಯಾಸಂಗ/ಕೌಶಲ್ಯವೃದ್ಧಿಗಾಗಿ ಕಲ್ಪಿಸುತ್ತಿರುವ ಅವಕಾಶಗಳ ಬಗ್ಗೆ ಸರಳವೂ ಅರ್ಥಮಾಡಿಕೊಳ್ಳಲು ಸುಲಭವೂ ಆದ ಮಾಹಿತಿ ಒದಗಿಸುವುದು.
  • ಶಿಕ್ಷಣಕ್ಕಾಗಿ, ವ್ಯಾಪಾರ ನಡೆಸುವುದಕ್ಕಾಗಿ ಮತ್ತು ಉದ್ಯೋಗಗಳನ್ನು ಸೃಷ್ಟಿಸುವುದಕ್ಕಾಗಿ ಬ್ಯಾಂಕುಗಳು ಒದಗಿಸುತ್ತಿರುವ ಹಲವು ಆರ್ಥಿಕಸೇವೆಗಳ ಬಗ್ಗೆ ಮಾಹಿತಿ ನೀಡುವುದು.
  • ಪ್ರತಿಯೊಬ್ಬ ವಿದ್ಯಾರ್ಥಿಗೂ ಮನೋಮಿತೀಯ (ಸೈಕೋಮೆಟ್ರಿಕ್) ಪರೀಕ್ಷೆ ನಡೆಸುವುದು.
  • ಪ್ರತಿಯೊಬ್ಬ ವಿದ್ಯಾರ್ಥಿಗೂ ಅವರವರ ಅಭಿರುಚಿ ಮತ್ತು ಆಸಕ್ತಿಗೆ ಅನುಸಾರವಾಗಿಆಪ್ತಸಮಾಲೋಚನೆ ನಡೆಸುವುದು.
  • ಯುವಜನರು ತಮ್ಮ ಸಮಸ್ಯೆಗಳು ಹಾಗೂ ಹಿಮ್ಮಾಹಿತಿಯನ್ನು ದಾಖಲಿಸಲು ಫೋರಂ ಸೃಷ್ಟಿಸುವುದು.

ಪ್ರತಿಯೊಂದು ಪ್ರೌಢಶಾಲೆ ಮತ್ತು ಕಾಲೇಜನ್ನು ಸಬಲೀಕರಣ ಕೇಂದ್ರವನ್ನಾಗಿ ಪರಿವರ್ತಿಸುವುದು ಈ ಕೇಂದ್ರಗಳ ಉದ್ದೇಶವಾಗಿದೆ.

ಪ್ರಕ್ರಿಯೆಗಳು
  • ಮೊದಲಿಗೆ, ಎಲ್ಲ ಜಿಲ್ಲೆಗಳಲ್ಲಿ ಆಯಾ ಲೀಡ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಯುವಸಬಲೀಕರಣ ಕೇಂದ್ರಗಳನ್ನು ಸ್ಥಾಪಿಸಲಾಗುವುದು.
  • ಪ್ರತಿಯೊಂದು ಪ್ರೌಢಶಾಲೆ, ಪಿಯು ಕಾಲೇಜು, ಪದವಿ ಕಾಲೇಜು ಮತ್ತು ಪಾಲಿಟೆಕ್ನಿಕ್‍ಗಳಲ್ಲಿ ಯುವಸಬಲೀಕರಣ ಕೇಂದ್ರಗಳನ್ನು ಸ್ಥಾಪಿಸುವುದು ಭವಿಷ್ಯದ ಯೋಜನೆಯಾಗಿರುತ್ತದೆ.
  • ಸೇವಾನಿರತ ಅಧ್ಯಾಪಕವೃಂದದಲ್ಲಿ ಆಪ್ತಸಮಾಲೋಚಕರನ್ನು ಆಯ್ಕೆ ಮಾಡಿ ಕೇಂದ್ರದ ಮೇಲ್ವಿಚಾರಕರನ್ನಾಗಿ ನಿಗದಿಗೊಳಿಸುವುದು.
  • ಪೋರ್ಟಲ್‍ನಲ್ಲಿ ಲಭ್ಯವಿರುವ ಮಾಹಿತಿಯನ್ನು ಉಪಯೋಗಿಸಿಕೊಂ ಪ್ರತಿಯೊಂದು ಕೇಂದ್ರವೂ ವಿದ್ಯಾರ್ಥಿಗಳಿಗೆ ನಿರ್ದಿಷ್ಟ ಅವಧಿಗಳಲ್ಲಿ ಮತ್ತೆಮತ್ತೆ ಶಿಕ್ಷಣ ನೀಡಿ, ಜಾಗೃತಿ ಮೂಡಿಸಿ ಆಪ್ತಸಮಾಲೋಚನೆ ನಡೆಸುತ್ತದೆ.
  • ಈ ಕೇಂದ್ರಗಳ ಕಾರ್ಯನಿರ್ವಹಣೆಯನ್ನು ಜಿಲ್ಲಾಧಿಕಾರಿಗಳ ನೇತೃತ್ವ ಜಿಲ್ಲಾಮಟ್ಟದ ಒಂದು ಸಮಿತಿ ನಿಯಮಿತವಾಗಿ ಪರಿಶೀಲಿಸಿ ಮಾರ್ಗದರ್ಶನ ನೀಡುತ್ತದೆ.
  • ವೆಬ್ ಪೋರ್ಟಲ್‍ಅನ್ನು ನವೀಕರಿಸಲು, ವಿವಿಧ ಪಾಲುದಾರರೊಂದಿಗೆ ಸಂವಾದ ನಡೆಸಲು (ಬೇರೆಬೇರೆ ಸರ್ಕಾರಿ ಇಲಾಖೆಗಳು, ಕೈಗಾರಿಕೆಗಳು ಇತ್ಯಾದಿ) ಮತ್ತು ಕೇಂದ್ರಗಳ ಕಾರ್ಯವೈಖರಿಯ ಪರಿಣಾಮಕಾರಿಯಾಗಿದೆಯೇ ಎಂಬುದನ್ನು ಪರಿಶೀಲಿಸಲು ರಾಜ್ಯಮಟ್ಟದ ಪ್ರಾಜೆಕ್ಟ್ ಮಾನಿಟರಿಂ್ ಯೂನಿಟಗ್ (ಪಿಎಂಯು)ವನ್ನು ಸ್ಥಾಪಿಸಲಾಗುವುದು.
ಸಾಮಥ್ರ್ಯ
  • ಪ್ರತಿಯೊಬ್ಬ ವಿದ್ಯಾರ್ಥಿಯನ್ನು ನೋಂದಾಯಿಸಿಕೊಂಡು ವಿವಿಧ ಸರ್ಕಾರಿ ಸೇವೆಗಳ ಹಾಗೂ ಯೋಜನೆಗಳ ಕುರಿತ ಮಾಹಿತಿಗೆ ಏಕ ದತ್ತಾಂಶ ಕೇಂದ್ರ (ಸಿಂಗಲ್ ಡೇಟಾ ಪಾಯಿಂಟ್) ಆಗಿ ಕಾರ್ಯನಿರ್ವಹಿಸುವುದು.
  • ವಿಭಿನ್ನ ಸೇವಾದಾರ ಸಂಸ್ಥೆಗಳು ಹಾಗೂ ಯುವಜನರ ನಡುವೆ ಸಂಪರ್ಕ ಸೇತುವಾಗಿ ಕೆಲಸಮಾಡುವ ಮೂಲಕ, ಪ್ರತಿಯೊಬ್ಬ ವಿದ್ಯಾರ್ಥಿಯೂ ತನಗೆ ಅರ್ಹತೆ ಇರುವ ಯೋಜನೆ/ಸೇವೆಯ ಫಲಾನುಭವಿಯಾಗುವಂತೆ ಖಾತ್ರಿಪಡಿಸಿಕೊಳ್ಳುವುದು.
  • ಪ್ರೌಢಶಾಲಾ ಹಂತದಿಂದಲೇ ಪ್ರತಿ ವಿದ್ಯಾರ್ಥಿಯೂ ಸೂಕ್ತವಾದ ಉದ್ಯೋಗಪಥದಲ್ಲಿ ಮುಂದುವರಿಯುವಂತೆ ಖಚಿತಪಡಿಸಿಕೊಳ್ಳುವುದು
  • ವಿದ್ಯಾರ್ಥಿಗಳ ಆಯ್ಕೆಯ ಹಾಗೂ ಕೈಗಾರಿಕಾ ಅಗತ್ಯಗಳಿಗೆ ಅನುಗುಣವಾಗಿ, ಪರಿಶೀಲಿತ ಹಾಗೂ ಯೋಜಿತ ರೀತಿಯಲ್ಲಿ ಸರ್ಕಾರ ಮಧ್ಯೆ ಪ್ರವೇಶಿಸುವಂತೆ ಮಾಹಿತಿ ಸಾಧನವಾಗಿ ಕಾರ್ಯನಿರ್ವಹಿವುದು.
  • ವಿದ್ಯಾಭ್ಯಾಸದ ವಿವಿಧ ಸ್ತರಗಳಲ್ಲಿ ಶಿಕ್ಷಣವನ್ನು ಅರ್ಧಕ್ಕೇ ಮೊಟಕುಗೊಳಿಸುವವರತ್ತ ಗಮನಹರಿಸಿ ಅದಕ್ಕೆ ಪರಿಹಾರಕ ಕ್ರಮಗಳನ್ನು ಕೈಗೊಳ್ಳುವುದು.
ಯುವಜನತೆಗೆ ಸೇವೆಗಳನ್ನು ನೀಡುತ್ತಿರುವ ಇಲಾಖೆಗಳು:
  • ಉನ್ನತ ಶಿಕ್ಷಣ
  • ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ
  • ಐಟಿ/ಬಿಟಿ ವಿಜ್ಞಾನ ಮತ್ತು ತಂತ್ರಜ್ಞಾನ
  • ಕೌಶಲ್ಯಾಭಿವೃದ್ಧಿ
  • ಯುವಜನ ಸಬಲೀಕರಣ ಮತ್ತು ಕ್ರೀಡೆ
  • ಸಮಾಜ ಕಲ್ಯಾಣ
  • ಅಲ್ಪಸಂಖ್ಯಾತ ಇಲಾS
  • ಹಿಂದುಳಿದ ವರ್ಗಗಳು
  • ಮಹಿಳಾ ಮತ್ತು ಮಕ್ಕಳು
  • ಕಾರ್ಮಿಕ
ಯುವಜನರಿಗೆ ನೀಡುತ್ತಿರುವ ಸೇವೆಗಳು:
  • ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
  • ಉನ್ನತ ಶಿಕ್ಷಣ-ಎಂಜಿನಿಯರಿಂಗ್, ಪಾಲಿಟೆಕ್ನಿಕ್ ಹಾಗೂ ವಿವಿಧ ಡಿಗ್ರಿ ಕೋರ್ಸ್‍ಗಳು
  • ವಿವಿಧ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳು
  • ಅಪ್ರೆಂಟಿಸ್ ತರಬೇತಿ
  • ಕ್ರೀಡಾ ವಿದ್ಯಾರ್ಥಿವೇತನಗಳನ್ನೂ ಒಳಗೊಂಡಂತೆ ವಿದ್ಯಾರ್ಥಿವೇತನಗಳು
  • ಶುಲ್ಕ ಮರುಪಾವತಿ, ರಿಯಾಯಿತಿ
  • ಸ್ವ-ಉದ್ಯೋಗ-ಸಹಾಯಧನ, ಸಾಲ, ಜಮೀನು ಇತ್ಯಾದಿ
  • ಬ್ಯಾಂಕಿಂಗ್ ಮತ್ತು ಆರ್ಥಿಕ ಸೇವೆಗಳು - ಶೈಕ್ಷಣಿಕ ಸಾಲ, ಮುದ್ರಾ ಸಾಲ ಇತ್ಯಾದಿ
All rights reserved by Government of Karnataka